top of page

ಒಂದು ದಿವ್ಯ ಪ್ರೇಮ ನಿವೇದನೆ!

  • Writer: NC
    NC
  • Dec 11, 2019
  • 3 min read

Updated: Mar 10, 2020


ree

ಆ ಹುಣ್ಣಿಮೆಯ ಸಂಜೆ ಕಚೇರಿಯ ಉದ್ಯಾನವನದಲ್ಲಿ ಜೊತೆಯಲ್ಲಿ ನಡೆದುಕೊಂಡು ಹೋಗುವಾಗ ಅವಳು ಹೇಳಿದಳು,

'ನಾನು ಜೀವನವನ್ನು ಯೋಜಿಸುವುದಿಲ್ಲ, ಅದರ ಸ್ವಾಭಾವಿಕತೆಯೊಂದಿಗೆ ಹರಿಯಲು ಇಷ್ಟಪಡುತ್ತೇನೆ'.  


ನಾನು ಗಮನಿಸಿದೆ, ಇದು ಇಪ್ಪತ್ತು ವರ್ಷದ ಅಸುಪಾಸಿನಲ್ಲಿರುವರ ಪ್ರತಿಕ್ರಿಯೆ ಎಂದು.


ನಾನು ಈಗಾಗಲೇ ‘ನಮ್ಮ ಜೀವನವನ್ನು ಆಯ್ಕೆಯ ಮೂಲಕ ವಿನ್ಯಾಸ ಗೊಳಿಸಲು ಸಾಧ್ಯ’ ಎಂದು ನಂಬಿದವನು. ‘ನಿಮ್ಮ ಕೈಲಾದುದನ್ನು ಮಾಡಿರಿ, ಕೆಟ್ಟ ಪ್ರತಿಕ್ರಿಯೆಗಳಿಗೆಗೆ ತಯಾರಾಗಿರಿ ನಂತರ ಏನು ಸಿಗುತದೆಯೋ ಅಧನ್ನು ಒಪ್ಪಿಕೊಳ್ಳಿ’, ಎಂಬ ಸಿದ್ದಾಂತಕ್ಕೆ ಬದ್ಧನಾಗಿರುವವನು.  ಆದರೂ ಸಹ ಒಂದು ಕ್ಷಣ ನನಗೆ ಧಿಗಿಲಾಯಿತು. 

ಅವಳ ಈ ವಿಧಾನವು ಪ್ರಕೃತಿಯ ಯೋಜನೆಯೊಂದಿಗೆ ಸಮತೋಲನವೋ, ಸೋಮಾರಿತನದ್ಧೋ ಅಥವಾ ನನ್ನ ‘ಆಯ್ಕೆಯ ಮೂಲಕ ಜೀವನದ ವಿನ್ಯಾಸ’ ಕ್ಕೂ ಮೀರಿದ್ಧ ಚಿಂತನೆಯೋ? ಉತ್ತರವನ್ನು ಶೀಘ್ರದಲ್ಲೇ ಪಡೆಯುವವನಾಗಿದ್ದೆ.


ಇಶು ಮುಂದುವರಿಸಿದಳು, 'ನಾನು ಹುಡುಗರಿಗೆ ನನ್ನೊಂದಿಗೆ ಸಮಯ ವ್ಯರ್ಥ ಮಾಡದಿರಲು ಹೇಳುತ್ತೇನೆ'


ಹಾಗೆ ಹೇಳುವಾಗ ನನ್ನ ಕಣ್ಣಿನದ್ರಿಷ್ಟಿಯಿಂದತಪ್ಪಿಸಿಕೊಂಡಿದ್ದನ್ನು ನಾನು ಸ್ಪಷ್ಟವಾಗಿ ಗಮನಿಸಿದೆ.  ನಾನು ಈಗಾಗಲೇ ಅವಳಿಗಾಗಿ ಜಗತನ್ನೆ ಎದರು ಹಾಕಿಕೊಳ್ಳಲು ತಯಾರಾಗಿದ್ದೆ. ಅವಳ ಇತರ ಹುಡುಗರ ಬಗ್ಗೆ ಚಿಂತೆ ಇರಲಿಲ್ಲ.

ree

ಬೆಳದಿಂಗಳು ನಮ್ಮ ಹಿಂಭಾಗದಿಂದ ಏರುತಿತ್ತು.  ನಾವು ನಡೆಯುವಾಗ ನಮ್ಮ ನೆರಳುಗಳು ಒಂದಕ್ಕೊಂದು ಅವರಿಸಿಕೊಳ್ಳುತಿದ್ದವು,  ಸುತ್ತೆಲ್ಲ ಸಿಲ್ವರ್ ಓಕ್  ಮರದ ಎಲೆಗಳ ಮೇಲೆ ಚಂದ್ರನ ಬೆಳಕು ಬಿದ್ದು ಬೆಳ್ಳಿಯ ಓಕುಳಿ ಉಂಟಾಗಿತ್ತು. ಮನಸ್ಸಿನಲ್ಲಿ ಒಂದು ಮಧುರವಾದ ಸಂಗೀತ, ಹಾರಾಡುತ್ತಿರುವ ಮುಂಗುರುಳುಗಳು, ನಸುಗತ್ತಲ ನಡುವೆ ಆಕೆಯ ಕೆನ್ನೆಯ ಮೇಲೆ ಕಾಣುತ್ತಿದ್ದ ಮಚ್ಚೆಯ ಆಹ್ಲಾದಕರವಾದ ಆಹ್ವಾನ, ಇಡೀ ಪ್ರಕೃತಿಯೇ ಮತ್ತು ಬರಿಸುವಂತಿತ್ತು.

ಅವಳ ಭುಜದ ಸುತ್ತಲೂ ನಾನು ನನ್ನತೋಳನ್ನು ಹಾಕಲು ಉತ್ಸಕನಾಗಿದ್ದೆ.  ಆದರೆ ಅವಳು ಪ್ರಸ್ತುತವನ್ನು ಆನಂದಿಸುವುದಕ್ಕಿಂತ ಹೆಚ್ಚಾಗಿ ಗತ ಜೀವನವನ್ನು ಕುರಿತು ಮಾತನಾಡುತ್ತಿದಳು.  ಹಾಗಾಗಿ ಈಕೆ ಖಂಡಿತವಾಗಿಯೂ ನನ್ನ ಪ್ರಕಾರದ ಹುಡುಗಿಯಲ್ಲ ಎಂದೆನಿಸಿ ನನ್ನ ಭಾವನೆಗಳನ್ನು ನಿಯಂತ್ರಿಸಿದೆ.


ನನಗೆ ಒಂದು ಕ್ಷಣ ಅನಿಸಿದ್ಧು ಎದುರಿಗಿದ್ದ ಇಬ್ಬನಿ ತುಂಬಿದ ಕೆಂಪು ಗುಲಾಬಿಯನ್ನು ಅವಳ ಮುಂದೆ ನಾಟಕೀಯವಾಗಿ ಮಂಡಿಯೂರಿ ಕೊಡಲೇ ಎಂದು. 


ಆ ಚಿಂತನೆಯಿಂದಲೇ ನನಗೆ ರೋಮಾಂಚನವಾಯಿತು.   ಈಗಾಗಲೇ ನಾನು ಐಶುಗೆ ಬಿಳಿ, ಹಳದಿ ಮತ್ತು ಹಸಿರು ಗುಲಾಬಿಗಳನ್ನು ಕೊಟ್ಟಿದ್ದೆ, ಮಂಡಿಯೂರಿಯಲ್ಲ.  ಪ್ರತಿ ಬಾರಿ ‘ಅವಳು ಹೇಳಿದ್ದು,


'ನೀನು ಹೂಗಳನ್ನು ವ್ಯರ್ಥ ಮಾಡುತ್ತಿದೀಯಾ',  'ನಾನು ವ್ಯರ್ಥ ಮಾಡುತ್ತಿಲ್ಲ, ಬಳಸುತ್ತಿದ್ದೇನೆ' ಇದು ನನ್ನ ಪ್ರತಿಬಾರಿಯ ಉತ್ತರವಾಗಿತ್ತು.


ನಮ್ಮ ಹಲವಾರು ಭೇಟಿಗಳಿಂದ ನಾನು ನನ್ನ ಪ್ರಪಂಚದಿಂಧ ಕ್ರಮೇಣ ಅವಳ ಪ್ರಪಂಚದ ಭಾಗವಾಗಲು ತಯಾರಾಗುತ್ತಿದ್ದೆ, ನನ್ನ ಕಲಿಕೆಯು ಅವಳ ಸ್ವಾಭಾವಿಕ ವ್ಯಕ್ತಿತ್ವ, ಸ್ಪಷ್ಟತೆ, ಆಕೆಯ ಆಲೋಚನೆಗಳು, ಅಭಿರುಚಿ ಮತ್ತು ಉದ್ದೇಶಗಳ ಶುದ್ಧತೆಗಳ ಮುಂಧೆ ನಗಣ್ಯವಾದಂತೆ ಅನಿಸತೊಡಗಿತು. ಇದು ನನ್ನ ಕನಸುಗಳನ್ನು, ಅನ್ವೇಷಣೆಗಳನ್ನು ಮತ್ತು ನನ್ನ ಪ್ರಪಂಚವನ್ನು ಬಿಟ್ಟು ಬಿಡಲು ಪ್ರೇರೇಪಿಸುತ್ತಿತ್ತು.


ಇನ್ನು ನನ್ನನ್ನು ನಾನು ನಿಯಂತ್ರಿಸಲು ಸಾಧ್ಯವಾಗಲಿಲ್ಲ, ನನ್ನ ಕೈಗಳಿಂದ ನಿಧಾನವಾಗಿ ಆ ಕೆಂಪು ಗುಲಾಬಿ ಹೂವನ್ನು ತೆಗೆದುಕೊಂಡೆ. ಆಕೆಯ ಇಪ್ಪತ್ತರ ದಟ್ಟವಾದ ಕಣ್ರೆಪ್ಪೆಗಳಿಂದ ತುಂಬಿದ ಕಣ್ಣುಗಳು, ನೈಸರ್ಗಿಕ ಗುಲಾಬಿ ಬಣ್ಣದ ತುಟಿಗಳು ಅದಕ್ಕೆ ಪೂರಕವಾದ ಉತ್ತರಭಾರತದ ಶ್ವೇತ ವರ್ಣದ ತ್ವಚೆಯನ್ನು ಹತ್ತಿರದಿಂದ ಗಮನಿಸಿದೆ. 

ಅವಳ ಒಂದೊಂದೇ ಕಣ್ಣುಗಳನ್ನು ದೃಷ್ಟಿಸುತ್ತ ಹೂವನ್ನು ಹಿಡಿದು ನಾನು ಹೇಳಿದೆ....

‘ನಾನು ನಿನ್ನ ಜೀವನದ ಭಾಗವಾಗಬಹುದೇ? ನಿನಗೆ ಬೇಕಾದ ರೀತಿಯಲ್ಲಿ, ನೀನು ನನ್ನನ್ನು ಬಯಸುವ ರೀತಿಯಲ್ಲಿ ...'

ree

ನನ್ನ ಹೃದಯವು ಮುಂದುವರಿಯುತ್ತಿತ್ತು ಆದರೆ ನನ್ನ ಬುದ್ಧಿವಂತಿಕೆಗೆ ಆಕೆ ನೆಡೆಯುವುದನ್ನು, ಮಾತಾಡುವುದನ್ನು ನಿಲ್ಲಿಸಿದ್ದಾಳೆ ಎಂದರ್ಥವಾಯಿತು.  ಒಂದು ಕ್ಷಣ ನನಗೆ ತಂಗಾಳಿ ಬಿಸಿಯಾದಂತೆ, ಚಂದ್ರ ಮೋಡದಲ್ಲಿ ಆವೃತವಾದಂತೆ ಭಾಸವಾಗತೊಡಗಿತು. ಆ ಕ್ಷಣಕ್ಕೆ ನಾನು ಮೌನವನ್ನು ಕೇಳಬಲ್ಲವನಾಗಿದ್ದೆ ಮತ್ತು ಆಕೆಯ ಉಸಿರಿನ ಲಯಬದ್ದತ್ತೆಯ ಏರುಪೇರನ್ನು ಗಮನಿಸಬಲ್ಲವನಾಗಿದ್ದೆ.  ಮೊಬೈಲ್ನ ಯ್ನ್ಯಾಕ್ ಸಂಗೀತ ನಿಂತು ಹೋಗಿತ್ತು.  ನನಗೆ ಏನು ಮಾಡಲು ತೋಚಲಿಲ್ಲ,

ಆ ನಸುಗತಲೆಯಲ್ಲಿ ಆಕೆಯ ಕಣ್ಣಿನ ಭಾವನೆಗಳನ್ನು ಗ್ರಹಿಸಲು ಅಸಾಧ್ಯವಾಗಿತ್ತು.  ಆದರೆ ಆ ಕ್ಷಣಗಳು ನನಗೆ ಬಹಳ ಅಮೂಲ್ಯ, ಹೃದಯದಿಂದ ಬದುಕವ ಒಂದು ಸಮಯ.  ನಾನು ರೂಮಿ ಅವರ ಮಾತುಗಳನ್ನು ನೆನಪಿಸಿಕೊಂಡೆ, " ಕ್ಷಣದಲ್ಲೇ ಎಲ್ಲವು ಇದೆ, ಅದು ಒಮ್ಮೆ ಕಳೆದರೆ, ನಂತರ ಜೀವನದಲ್ಲೇ ಪುನಃ ಸಿಗುವುದಿಲ್ಲ“  ಇಂತಹ ಕ್ಷಣಗಳಿಗಾಗಿ ನಾನು ವರುಷಗಳಿಂದ ಕನಸು ಕಂಡಿದ್ದೆ. ನಾನು ಚಿಂತಿಸಲಿಲ್ಲ, ಅಥವಾ ಅವಸರಿಸಲಿಲ್ಲ. 


ಆ ಕ್ಷಣದಲ್ಲಿ ನಾನು ಒಂದು ಸ್ತ್ರಿಯಾಗಿ ಪರಿವರ್ತನೆಗೊಂಡಿದ್ದೆ, ಏಕೆಂದರೆ ಸ್ತ್ರಿಯರಿಗೆ ಮಾತ್ರ ಸಮರ್ಪಣೆ ಎಂಬುದರ ನಿಜವಾದ ಅರ್ಥ ಗೊತ್ತಿದೆ. ನಾನು ಕೆಲವು ಹೆಜ್ಜೆ  ಹಿಂದಕ್ಕೆ ಬಂದು ಹಾಗು ಹೇಳಬೇಕೆಂದಿದ್ದನ್ನು ಮುಂದುವರಿಸಿದೆ


... ನಿನ್ನ ಕನಸಿನ ಭಾಗವಾಗಿ, ನಿನ್ನ ಜೀವನದ ಭಾಗವಾಗಿ, ಮತ್ತು ನೀನ್ನಲ್ಲೇ ಒಂದು ಭಾಗವಾಗಿ ನನ್ನ ಜೀವನದ ಸಾರ್ಥಕತೆ ಪಡಯಲಿಕ್ಕೆ’. ಅವಳು ನನ್ನ ಕೈಯಲ್ಲಿದ್ದ  ಗುಲಾಬಿಯನ್ನು ಹೂವನ್ನು ತೆಗೆದುಕೊಂಡಿಲ್ಲವಾದ್ದರಿಂದ, ನಾನು ನಿಧಾನವಾಗಿ ಮಂಡಿಯೂರಿ ಮತ್ತು ಅವಳ ಪಾದಗಳಲ್ಲಿ ಇಟ್ಟುಬಿಟ್ಟೆ.

 ನನ್ನ ಜೀವನದಲ್ಲಿ ಮೊದಲ ಬಾರಿಗೆ ನನ್ನನ್ನು ನಾನು ಸಂಪೂರ್ಣವಾಗಿ ಮತ್ತು ಬೇಷರತ್ತಾಗಿ ಬಿಟ್ಟು ಕೊಟ್ಟಿದ್ದೆ. ನನ್ನ ಅಣುವಿನಲ್ಲೂ ನನ್ನತನ ಉಳಿದಿರಲಿಲ್ಲ. ತತ್ಕ್ಷಣದಲ್ಲೇ ಒಂದು ಅಸಾಮಾನ್ಯ ಶಾಂತತೆ ಆವರಿಸಿಕೊಂಡಿತ್ತು. ಆ ಕತ್ತಲೆಯಲ್ಲಿ ಇದ್ದಕ್ಕಿದ್ದಂತೆ ವಿಧಿ ಬರಹ, ಆತ್ಮಸಂಗಾತಿಗಳು ,  ಕಾಲ, ಮುಖಾಮುಖಿ ಮುಂತಾದ ನಿಗೂಢ ವಿಷಯಗಳು ಸ್ವತಃ ಸಂಪೂರ್ಣವಾಗಿ ಅರ್ಥವಾಗಲು ಪ್ರಾರಂಭಿಸಿದವು.


ಅವಳು ನಿಧಾನವಾಗಿ ತನ್ನ ಪಾದದಲ್ಲಿದ್ದ ಹೂವನ್ನು ತೆಗೆದುಕೊಂಡು ಮತ್ತದೇ ಪದಗಳನ್ನು ಪುನರಾವರ್ತಿಸುವ ಮೂಲಕ ಮೌನವನ್ನು ಮುರಿದಳು, ‘ನೀನು ಇನ್ನೊಂದು ಹೂವನ್ನು ವ್ಯರ್ಥ ಮಾಡಿಧೆ’.  ಇದರಿಂದ  ನನಗೆ ಹಿಂಜರಿಕೆಯಾಗಲಿ ಅಥವಾ ಅದು ಮುಖ್ಯವೆನಿಸಲಿಲ್ಲ.  ನಾನು ಉತ್ತರ ಕೊಡುವ ಅಗತ್ಯವೂ ಕಾಣಲಿಲ್ಲ. ನಾನು ಹೂವೊಂಧಿಗೆ ಅದರುತಿರುವ ಅವಳ ಕೈಗಳನ್ನು ಗಮನಿಸಿದೆ.

ನಾನು ಪ್ರೀತಿ ಏನೆಂಬುದೆಂದು ಕಲಿತೆ. ಬಾಹ್ಯ ಪ್ರಚೋದನೆಯು ಅವಶ್ಯಕವಾಗಿದ್ದರೂ, ಇದು ಬಾಹ್ಯದ ವಿಷಯವಲ್ಲ, ಅದು ಪ್ರತಿ ಹೃದಯದಲ್ಲಿಯೂ ಇರುತ್ತದೆ. ನಾನು ನಿರೀಕ್ಷೆಯಿಲ್ಲದೆ ಪ್ರೀತಿಸುವುದನ್ನು ಕಲಿತೆ. ಅದು ನಿಜವಾಗಿಯೂ ನಮ್ಮದಾಗಿದ್ದರೆ ಅದು ನಮ್ಮಲ್ಲಿ ಉಳಿಯುತ್ತದೆ. ಇದು ಹತೋಟಿಯ ವಿಷಯವಲ್ಲ, ಇದು ವ್ಯಕ್ತಿ ಸ್ವತಂತ್ರದ ವಿಷಯ.  ಇದು ತಿಳುದುಕೊಳ್ಳುವ ವಿಷಯವಲ್ಲ. ಇದು ಬದುಕುವ ಕಲೆ.

ಇದು ಕರಾವಳಿಯ ಸುರಕ್ಷಿತ ಬೇಲಿಯ ಒಳಗೆ ಕುಳಿತುಕೊಂಡು ಸಮುದ್ರವನ್ನು ನೋಡುವ ತರಹವಲ್ಲ. ಇದು ಬೃಹತ್ ಅಲೆಗಳ ಮಧ್ಯದಲ್ಲಿ ಅದರ ತೇವವನ್ನು ಅನುಭವಿಸುತ್ತಾ, ಅದರ ಒಂದು ಭಾಗವಾಗಿ, ಅದರ ಹೃದಯದಲ್ಲಿ ನನ್ನ ಅತ್ಯುತ್ತಮ ಆಸಕ್ತಿಯನ್ನು ಕಾಪಾಡಿಕೊಳ್ಳುವ ಬಗ್ಗೆ ಸಾಮರ್ಥ್ಯ ಇದೆ ಎನ್ನುವ ಬಲವಾದ ನಂಬಿಕೆಯೊಂದಿಗೆ ಸೇರಿಕೊಳ್ಳುವುದಾಗಿದೆ.  


ಅಂದಿನ ಸಂಜೆಯಿಂದ ನನ್ನ ಜೀವನವೇ ಬದಲಾಯಿತು, ಪ್ರತಿಯೊಂದು ಕ್ಷೇತ್ರದಲ್ಲೂ ಏರು ಗತಿ ಕಾಣಿಸತೊಡಗಿತು.


Read complete version of 'The Reminiscences of a True Love' at ...


Comments


Subscribe Live By Heart! articles!

Articles on life experiences, poetry, management, leadership and trainings

© 2016 - 2022 by Naveen Chandra R. Proudly created with Wix.com 

bottom of page